ಗಗನದ ನದಿ ಮತ್ತು ಆಲದ ಮರ (ಭಾಗ 1) | The River in the Sky and the Banyan Tree (Part 1)

[ಕನ್ನಡ ವಿಭಾಗ - For the English Version, please scroll down]

ಕಥೆಗಾರಿಯೂ ಭೆಂಕಿಯ ಮುಂದೆ ಕುಳಿತು, ನಮ್ಮ ದಿಕ್ಕಿನ ಕಡೆ ನೋಡಿದಳು. ಬಹುವರ್ಷ ವಯಸ್ಸಾದ ಪುರಾಣ-ಕಥೆಯನ್ನು ಶುರು ಮಾಡಿದಳು. ಇದು ಅವಳು ಹೇಳಿದ ಕಥೆ:

ಗಗನದ ತಾರೆಗಳು, ನಮ್ಮ ಜನರೇ ಕಣೋ. ನಮ್ಮ ಪೂರ್ವಜರು ಹಿಂದಿನ ಕಾಲಗಳಿಂದ ಎದ್ದು ಹಾರಿ, ಆಕಾಶಕ್ಕೆ ಏರಿ, ಗಗನದಲ್ಲಿ ಮನೆ ಮಾಡಿಕೊಂಡರು. ಪ್ರತಿ ಒಂದು ನಕ್ಷತ್ರವು ನಮ್ಮ ಜನರ ಒಂದು ಮನೆ. ನಕ್ಷತ್ರದ ಬೆಳಕು ಯೇನು ಗೊತ್ತಾ? ಅದು ನಮ್ಮ ಪೂರ್ವಜರ ಒಲೆಗಳ ಭೆಂಕಿ. ಆ ಒಲೆಗಳ ಮೇಲೆ ನಮ್ಮ ಜನರು ನಮಗೆ ನೀರಿನ ಪ್ರಸಾದವನ್ನು ತಯ್ಯಾರಿಸುತ್ತಾರೆ.

ನಮ್ಮ ತಲೆಗಳ ಮೇಲೆ ಸುತ್ತುವ ಆಕಾಶಗಳು, ಭೆಂಕಿ ಮತ್ತೆ ನೀರಿನ ಮಧ್ಯೆ ನಡೆಯುವ ನಾಟಕದ ರಂಗಸ್ಥಳ. ಎಲ್ಲಾ ಭೆಂಕಿಯ ತಂದೆ, ಆ ಎತ್ತರದ ಸೂರ್ಯನು, ತನ್ನ ಅಕ್ಕಾ-ತಂಗಿಯರಿಂದ ನೀರು ಕದಿಯುತ್ತಿದ್ದಾ. ಆ ಅಕ್ಕಾ-ತಂಗಿಯರು ಯಾರು ಗೊತ್ತೇ? ನಮ್ಮ ಮಖಗಳ ಮೇಲೆ ಮುದ್ದು ಕೊಡುವ ಗಾಳಿಗಳು. ಸೂರ್ಯನಿಗೆ ತನ್ನ ಅಕ್ಕಾ-ತಂಗಿಯರಿಂದ ಸಿಕ್ಕಿದ ನೀರು ಬಹಳ ಇಷ್ಟವಾಗುತ್ತಿತ್ತು. ಅವನಿಗೆ ಆಗುತ್ತಿದರೆ, ಎಲ್ಲಾ ನೀರನ್ನು ಅವನ ಜೊತೆಗೆ ಇಟ್ಟುಕೊಂಡು, ಬೇರೆ ಯಾರಿಗೂ ಕೊಡುವುದಕ್ಕೆ ಇಷ್ಟಪಡೆಯುತ್ತಿರಲಿಲ್ಲಾ.

ಸ್ಥಿತಿ ಹೀಗಿದ್ದಾಗ, ನಮಗೆ ನೀರಿನ ಪ್ರಸಾದ ಹೇಗೆ ಸಿಕ್ಕಿತು? ಇದಕ್ಕೆ ನಾವು, ಆ ಸೂರ್ಯನ ತಮ್ಮ, ಚಂದಾಮಾಮನನ್ನು, ಅಭಿನಂದಿಸಬೇಕು. ತುಂಬಾ ವರ್ಷಗಳ ಹಿಂದೆ, ಸೂರ್ಯ ರಾತ್ರಿ ನಿದ್ದೆ ಮಾಡುತ್ತಿರುವಾಗ ಅವನ ಮನೆ ಒಳಗೆ ಚಂದಾಮಾಮನು ನುಗ್ಗಿ, ನೀರನ್ನು ಕದ್ದುತ್ತಿದ್ದಾ. ಈ ಕದ್ದಿದ ನೀರನ್ನು ಚಂದಾಮಾಮನು ಆಕಾಶದಲ್ಲಿ ಇರುವ ನಮ್ಮ ಪೂರ್ವಜರಿಗೆ ನೀಡುತ್ತಿದ್ದಾ. ನಮ್ಮ ಜನರು ನೀರನ್ನು ಸ್ವೀಕರಿಸಿ, ಒಲೆಯ ಮೇಲೆ ಕುದಿಸಿ, ಹಬೆಯ ಪ್ರಸಾದವನ್ನು ಮಾಡುತ್ತಿದ್ದರೂ.

ಸೂರ್ಯ-ಚಂದ್ರ-ಗಾಳಿಗಳು ಈಗ ಜಗಳ ಮಾಡುವುದಿಲ್ಲ. ಕದ್ದಿನ ಅಪರಾಧವನ್ನು ಬಿಟ್ಟು, ಈಗ ಗಗನದಲ್ಲಿ ಬರೀ ನೀರಿನ ದಾನ ನಡೆಯುತ್ತದೆ. ಗಾಳಿಗಳು ತಮ್ಮ ಅಣ್ಣನಿಗೆ ನೀರಿನ ದಾನ ಮಾಡುತ್ತಾರೆ. ಇದರಿಂದ ಸ್ವಲ್ಪ ನೀರನ್ನು ಸೂರ್ಯನು ನಮ್ಮ ಚಂದಾಮಾಮನಿಗೆ ಕೊಡುತ್ತಾನೆ. ಚಂದಮಾಮನು ನೀರನ್ನು ನಮ್ಮ ಆಕಾಶದ ಜನರಿಗೆ ನೀಡುತ್ತಾನೆ, ಮತ್ತೆ ಈ ಸಿಕ್ಕಿದ ನೀರಿಂದ ನಮ್ಮ ಪೂರ್ವಜರು ನಮಗೆ ಪ್ರಸಾದ ಕುದಿಸುತ್ತಾರೆ.

ಈಗಲೂ ನಾವು ನೋಡಬಹುದು -- ಅಲ್ಲಿ ನೋಡಿ! ಆಕಾಶದಲ್ಲಿ ಇರುವ ಬಿಲ್ಲುಗಾರರ ಮನೆಯ ಕಡೆಗೆ. ಅಲ್ಲೇ ತಾರೆಗಳು ದಟ್ಟವಾಗಿವೆ, ಹಲವಾರುಗಳಿವೆ. ಅಲ್ಲಿಂದ ಬರುವ ನೀರಿನ ಹೊಗೆಯು ನಮಗೆ ಕಾಣ ಬಹುದು. ಮೋಡದ ಮೇಲೆ ಮೋಡ ಕಾಣಿಸುತ್ತದೆ. ಈ ಮೋಡಗಳು ಒಟ್ಟಾಗಿ, ಒಂದಾಗುತ್ತವೇ. ಸರಿಸುತ್ತವೆ, ಸುರಿಯುತ್ತವೆ. ಒಂದಾಗಿ, ಒಗ್ಗಟ್ಟಿನಿಂದ ಸುರಿದಾಗ ಆಕಾಶದಲ್ಲಿ ಹೊರ ಹೊಮ್ಮುತ್ತದೆ ಒಂದು ನದಿ. ಇದು ಗಗನದ ನದಿ. ನಮ್ಮ ಪ್ರಪಂಚದ ಎಲ್ಲಾ ಜೀವಿಗಳ ಮೂಲ.

ಆದರೆ ಒಂದು ಮಾತು ಇದೆಯಪ್ಪ. ಈ ಗಗನದ ನದಿಯು ನಮ್ಮ ಆಕಾಶದ ಬಹಳ ಎತ್ತರದ ಸ್ಥಾನದಲ್ಲಿ ಸುರಿಯುತ್ತದೆ. ಅಲ್ಲಿಂದ ನಮ್ಮ ಪೂರ್ವಜರು ನಮಗೆ ಪ್ರಸಾದವನ್ನು ತಲುಪಿಸ ಬೇಕೆಂದರೆ, ಕಷ್ಟವಾಗುವುದಿಲ್ಲವೇ? ಈ ನೀರಿನ ಪ್ರಸಾದವನ್ನು ಹೇಗೆ ಕಲಳಿಸುತ್ತಾರೆ? ಹೇಳಿ?

ಗೊತ್ತಿಲ್ಲವೇ? ಪರವಾಗಿಲ್ಲಾ. ಇದಕ್ಕೆ ನಿಮಗೆ ಉತ್ತರ ಬೇಕೆಂದರೆ, ನಾನು ನಿಮಗೆ ಇನ್ನೊಂದು ಕಥೆಯನ್ನು ಹೇಳಬೇಕು. ಈ ಕಥೆಯು ಆಲದ ಮರದ ಬಗ್ಗೆ.

___

ಕತೆಗಾರಿಯೂ ಅವಳ ಕಥೆಯ ಮೊದಲ ಭಾಗ ಇಲ್ಲಿ ನಿಲ್ಲಿಸದಳು. ಮುಂದಿನ ವಾರ ಕಥೆಯನ್ನು ಮುಗಿಸುತ್ತಾಳೆ ಅಂದಳು.

ನನ್ನ ಮಾತು: ಈ ಕಥೆಯು "ದೊಡ್ಡ ನಾಡು" ಪ್ರಪಂಚದ ಭಾಗ. ದೊಡ್ಡ ನಾಡು ಪ್ರಪಂಚವು ಒಂದು ಕಾಲ್ಪನಿಕ ಪ್ರಪಂಚ. ನನ್ನ ಮೊದಲನೆಯ (ಈಗ ಬರೆಯುತ್ತಿರುವ) ಕಾದಂಬರಿಯು ಈ ಪ್ರಪಂಚದಲ್ಲಿ ಸ್ಥಾಪಿಸಿದೆನೆ. ಗನದ ನದಿ ಮತ್ತು ಆಲದ ಮರದ ಕಥೆಯು, ದೊಡ್ಡನಾಡುವಿನಲ್ಲಿ ವಾಸಿಸುತ್ತಿರುವ ಒಂದು ಜನಾಂಗದ ಹಳೆ ಪುರಾಣ.


[English Version]

And the storyteller sat at the fire, her eyes open, seeking our gaze, as she commenced yet another tale from the centuries past. This is what she told us...

The stars are our people, who ascended from the past to take their place in the vaults of heaven. Every star is a house, and the light we see is the brilliance of their eternal hearths, over which they prepare their gift to us -- the gift of water.

The heavens above are a cosmic play between fire and water. A long time ago, the Sun, father of all fire, used to steal water from his sisters, the Winds. The Sun would have kept all water for himself, if not for his brother, the Moon. The Moon used to sneak into the Sun's house and steal his water while he slept. This, he would gift to his people, our people, who sit around star-fires. Our ancestors would then boil the Moon's gift over their hearths. For us.

The Sun, the Moon, and the Winds do not fight anymore. Their battles have ended, their enmity buried. Instead, they gift. The Winds gift water to the Sun, and the Sun now gifts some of it to the Moon. The Moon continues gifting to our people, who in turn gift water to us.

Even now, if you want to see the steams from their fires, look at the night sky towards the archers' homes. Look! That is where the stars are most dense and their fires brightest. The steam from their hearths gather around their homes. Cloud by cloud, the steam gathers strength. It moves. It roils. It flows. It becomes the River in the Sky, the source of life, all life.

But there is an issue. The River in the Sky is too far up, too far away from the Earth to come down to us. How then, do we receive our ancestors' gift?

For that, my dears, we need to know about the Banyan Tree.

___

The storyteller ended the first part of her tale here, promising to finish it next week.

Author's Note: The above tale is part of the Dodda Nadu Universe, a fictional world where my first novel (which I'm currently writing) is set. The River in the Sky and the Banyan Tree is a legend that's popular among a particular community of people in that Universe.



ಗಗನದ ನದಿ ಮತ್ತು ಆಲದ ಮರ (ಭಾಗ 1) | The River in the Sky and the Banyan Tree (Part 1) by Amogh Arakali is licensed under a Creative Commons Attribution-NonCommercial-NoDerivatives 4.0 International License.

Write a comment ...

Amogh Arakali

Fiction, Poetry, Art and Audio from Amogh Arakali